ಆಷ್‍ಲ್ಯಾಂಡ್
	ಉತ್ತರ ಅಮೆರಿಕದ ಈಶಾನ್ಯ ಕೆಂಚುಕಿ ಪ್ರದೇಶದಲ್ಲಿರುವ ಒಂದು ಪಟ್ಟಣ. ಒಹಾಯೊ ನದಿಯ ದಡದ ಮೇಲಿದೆ.  ಜನಸಂಖ್ಯೆ 31,280 ಬಟ್ಟೆ ಗಿರಣಿಗಳಿವೆ. ಚರ್ಮ, ಪಾದರಕ್ಷೆ, ರಾಸಾಯನಿಕ ವಸ್ತುಗಳು, ಉಕ್ಕು, ಆಹಾರ ಪದಾರ್ಥಗಳು-ಇವೇ ಮುಖ್ಯ ಉತ್ಪನ್ನಗಳು. ಉತ್ತರ ಅಮೆರಿಕದ ಉತ್ತರ ಒಹಾಯೊ, ನೈಋತ್ಯ ಓರೆಗಾನ್, ಪೆನ್ಸಿಲ್ವೇನಿಯ, ಸುಪೀರಿಯರ್ ಸರೋವರದ ಬಳಿಯಲ್ಲಿರುವ ಉತ್ತರ ವಿಸ್‍ಕಾನ್‍ಸಿನ್‍ಗಳಲ್ಲೂ ಇದೇ ಹೆಸರಿನ ಪಟ್ಟಣಗಳಿವೆ. 					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ